ನಾನು ಕೆ.ಎನ್. ಗಣೇಶಯ್ಯನವರ ಕಾದಂಬರಿ ಓದಿದ್ದು ಇದೇ ಮೊದಲು. ಅವರ ಕಾದಂಬರಿಗಳು, ಹೇಳುವ ಕಥೆಯೊಡನೆ ಕೆಲವು ಐತಿಹಾಸಿಕ ಘಟನೆಗಳ ಮೇಲೂ ಬೆಳಕು ಚೆಲ್ಲುತ್ತದೆ ಅಂತ ಕೇಳಿದ್ದೆ . ಈ ಕಾದಂಬರಿ ಓದಿದ ಮೇಲೆ ಅದು ನಿಜ ಅನ್ನಿಸಿದೆ .
ಮಾಮೂಲಿ thriller ಕಾದಂಬರಿಗಳಂತೆಯೇ ಇಲ್ಲಿ ಒಂದು ಕೊಲೆ ಆಗುತ್ತೆ . ಇಷ್ಟೇ ಆಗಿದ್ದರೆ ಅದರಲ್ಲೇನು ವಿಶೇಷ ಇರ್ಲಿಲ್ಲ . ಆದರೆ ಆ ಕೊಲೆಯನ್ನು ಬೇಧಿಸಲು ಹೊರಟಾಗ ದೊರೆಯುವ ಕೆಲವು ಐತಿಹಾಸಿಕ ಸತ್ಯಗಳು , ಸತ್ಯದಂತೆ ಕಾಣುವ ಮಿಥ್ಯಗಳು ಕಾದಂಬರಿಯನ್ನು ರಸವತ್ತಾಗಿಸುತ್ತವೆ.
ಅಲೆಕ್ಸಾನ್ದರ ದಂಡ ಯಾತ್ರೆ , ಅವನು ಬಚ್ಚಿಟ್ಟಿದ್ದಾನೆ ಎನ್ನಲಾದ ನಿಧಿಗಳು , ಬುದ್ಧನ ಹಲ್ಲಿನ ರಹಸ್ಯ , ಬೌದ್ಧ ಧರ್ಮದ ಇತಿಹಾಸ , ಹೀಗೆ ಹಲವಾರು ವಿಷಯಗಳ ಹಾಗೂ ದಂತ ಕಥೆಗಳ ಸುತ್ತ ಕಥೆ ಸುತ್ತುತ್ತದೆ . ಕನ್ನಡದಲ್ಲಿ ಪ್ರಾಯಶಃ ಇಂಥ ಪ್ರಯತ್ನ ಇದೆ ಮೊದಲೇನೋ ! ಖಂಡಿತ ಒಂದು ಉತ್ತಮ ಪ್ರಯತ್ನ , ಅದರಲ್ಲೂ ನಿಮಗೆ ಇತಿಹಾಸದಲ್ಲಿ ಆಸಕ್ತಿ ಇದ್ದರೆ, ಈ ಕಾದಂಬರಿ ಖಂಡಿತ ಇಷ್ಟ ಆಗುತ್ತದೆ.

